ವಿಷಮಚಕ್ರೀಯ ಸಂಯುಕ್ತಗಳು

	ಅಣುರಚನೆಯಲ್ಲಿ ಕಾರ್ಬನ್ ಮಾತ್ರವಲ್ಲದೆ ನೈಟ್ರೊಜನ್, ಆಕ್ಸಿಜನ್ ಇಲ್ಲವೆ ಸಲ್ಫರ್ (ಗಂಧಕ) ಇವುಗಳ ಒಂದು ಅಥವಾ ಎರಡು ಪರಮಾಣುಗಳಿಂದ ಕೂಡಿದ ಚಕ್ರಗಳುಳ್ಳ ಸಂಯುಕ್ತಗಳು (ಹೆಟಿರೊಸೈಕ್ಲಿಕ್ ಕಾಂಪೌಂಡ್ಸ್). ವಿದೃಶಚಕ್ರೀಯ ಸಂಯುಕ್ತಗಳು ಪರ್ಯಾಯ ನಾಮ. ಸೈಕ್ಲಿಕ್ ಈಥರುಗಳು, ಎಥಿಲೀನ್ ಆಕ್ಸೈಡುಗಳು, ಸಿಟ್ರಿಕ್ ಅನ್‍ಹೈಡ್ರೈಡುಗಳು, ಲ್ಯಾಕ್ಟೋನುಗಳು, ಥಾಲಿಮೈಡುಗಳು, ಫ್ಯೂರಿನ್ನುಗಳು, ಶರ್ಕರಗಳು ಮೊದಲಾದವುಗಳಲ್ಲಿ ಕಾರ್ಬನ್ನಿನ ಜೊತೆಗೆ ಆಕ್ಸಿಜನ್, ನೈಟ್ರೊಜನ್ನಿನಂಥ ಭಿನ್ನ (ಹೆಟಿರೊ) ಪರಮಾಣುಗಳಿಂದ ಕೂಡಿದ ವಿಷಮಚಕ್ರೀಯ ಸಂಯುಕ್ತಗಳನ್ನು ಕಾಣಬಹುದು. 

	ಕಾರ್ಬನ್‍ಚಕ್ರೀಯ (ಕಾರ್ಬೊಸೈಕ್ಲಿಕ್) ಸಂಯುಕ್ತಗಳಲ್ಲಿ ಇರುವಂತೆ ಈ ಸಂಯುಕ್ತಗಳಲ್ಲೂ ಐದು ಇಲ್ಲವೆ ಆರು ಪರಮಾಣುಗಳನ್ನು ಒಳಗೊಂಡ ಚಕ್ರಗಳ ರಚನೆಗಳು ಬಲು ಸ್ಥಿರವಾಗಿರುತ್ತವೆ. ಅನೇಕ ವಿಷಮಚಕ್ರೀಯ ಸಂಯುಕ್ತಗಳನ್ನು ನೈಸರ್ಗಿಕವಾದ ಕೋಲ್‍ಟಾರ್ ಮತ್ತು ಸಸ್ಯಜನ್ಯ ಪದಾರ್ಥಗಳಿಂದ ಉತ್ಪಾದಿಸಬಹುದು. ಸಾಮಾನ್ಯ ಸಂಯೋಗಪದ್ಧತಿಯಿಂದಲೂ ಅನೇಕ ಸಂಯೋಗಕಾರಕಗಳನ್ನು ಬಳಸಿ ವಿಷಮಚಕ್ರೀಯ ಸಂಯುಕ್ತಗಳನ್ನು ತಯಾರಿಸಬಹುದು. 
	ಪಂಚ ಪರಮಾಣವಿಕ ಚಕ್ರೀಯ ಸಂಯುಕ್ತಗಳು : ಇವು ನಾಲ್ಕು ಕಾರ್ಬನ್ ಪರಮಾಣುಗಳು ಮತ್ತು ಇನ್ನೊಂದು ಆಕ್ಸಿಜನ್ ಇಲ್ಲವೆ ಸಲ್ಫರ್ ಅಥವಾ ಅಮೈಡಿನಂಥ ಭಿನ್ನ ಪರಮಾಣುವಿನಿಂದ ಕೂಡಿದ ವಿಷಮ ಚಕ್ರಗಳುಳ್ಳ ಸಂಯುಕ್ತಗಳು : 1. ಫ್ಯುರಾನ್, 2. ಥಯೊಫೀನ್ ಮತ್ತು 3. ಪಿರ್ರೋಲ್. ಇವುಗಳ ರಾಸಾಯನಿಕ ಸೂತ್ರ ಅನುಕ್ರಮವಾಗಿ   ಅ4ಊ4ಔ, ಅ4ಊ4S ಮತ್ತು ಅ4ಊ4ಓಊ 

	1. ಫ್ಯುರಾನ್ : ಇದು ಪೈನ್ ಮರದ ಟಾರು ಮತ್ತು ಕಾಳಿನ ಮೇಲಿನ ತೌಡು (ಬ್ರಾನ್) ಮುಂತಾದವುಗಳಲ್ಲಿ ಇದೆ. ಫ್ಯುರಾಯಿಕ್ ಅಥವಾ ಮ್ಯೂನಿಕ್ ಆಮ್ಲಗಳ ಆಸವನದಿಂದ ಇದನ್ನು ತಯಾರಿಸ ಬಹುದು. ಇದರ ವಾಸನೆ ಕ್ಲೋರೊಫಾರ್ಮಿನಂತೆ. ಇದು ವರ್ಣರಹಿತ ದ್ರವ. ಫ್ಯುರಾನ್ ಅಷ್ಟೇನು ಮಹತ್ತ್ವವುಳ್ಳ ಸಂಯುಕ್ತ ಅಲ್ಲದಿದ್ದರೂ ಇದರಿಂದ ಉತ್ಪನ್ನವಾಗುವ ಇತರ ಸಂಯುಕ್ತಗಳು ವಾಣಿಜ್ಯ ದೃಷ್ಟಿಯಿಂದ ಮಹತ್ತ್ವ ಪಡೆದಿವೆ. ಉದಾಹರಣೆಗೆ ಫ್ಯುರ್‍ಫ್ಯುರಾಲ್. ಇದು ಮೋಟರ್‍ತೈಲದಂತೆ ಇದೆ. ಮೆರುಗೆಣ್ಣೆಗಳ ತಯಾರಿಕೆ, ಕಟ್ಟಿಗೆ, ಚರ್ಮ ಇವುಗಳ ರಕ್ಷಣೆ ಮುಂತಾದೆಡೆಗಳಲ್ಲಿ ಇದರ ಬಳಕೆ ಇದೆ. 

	2. ಥಯೊಫೀನ್ : ಇದು ಕೋಲ್‍ಟಾರಿನಿಂದ ತಯಾರಿಸಿದ ಬೆನ್‍ಜಿûೀನಿ ನಲ್ಲಿ ಅಲ್ಪ ಪ್ರಮಾಣದಲ್ಲಿ (0.06%) ಇರುವುದನ್ನು ವಿಕ್ಟರ್ ಮೇಯರ್ ಎಂಬ ರಸಾಯನವಿಜ್ಞಾನಿ ಪ್ರಾಯೋಗಿಕವಾಗಿ ತೋರಿಸಿದ. ಬೆನ್‍ಜಿûೀನ್ (ಕುದಿಬಿಂದು 80.4º ಅ) ಮತ್ತು ಥಯೊಫೀನ್ (ಕುದಿಬಿಂದು 84º ಅ) ಇವೆರಡರ ಕುದಿಬಿಂದುಗಳು ಹೆಚ್ಚುಕಡಿಮೆ ಒಂದೇ ಆಗಿರುವುದರಿಂದ ಥಯೊಫೀನನ್ನು ಬೆನ್‍ಜಿûೀನಿನಿಂದ ಬೇರ್ಪಡಿಸುವುದು ಬಲು ಕಷ್ಟ. ಥಯೊಫೀನ್ ವರ್ಣರಹಿತ ದ್ರವ. ಬೆನ್‍ಜಿûೀನಿನಂತೆ ವಾಸನೆಯುಳ್ಳದ್ದು. ಇಸಾಟಿನ್ ಹಾಗೂ ಸಲ್ಫ್ಯುರಿಕ್ ಆಮ್ಲಗಳ ಜೊತೆ ಕಾಸಿದರೆ ನೀಲಿ ವರ್ಣ ಪಡೆಯುತ್ತದೆ. ಇದು ಸಲ್ಫೂರಿಕ್ ಆಮ್ಲದ ಜೊತೆ ಬೆನ್‍ಜಿûೀನಿ ಗಿಂತಲೂ ಬೇಗ ವರ್ತಿಸಿ ಸಂಯುಕ್ತವಾಗುವುದರಿಂದ ಬೆನ್‍ಜಿûೀನನ್ನು ಥಯೊಫೀನಿನಿಂದ ಬೇರ್ಪಡಿಸಲು ಈ ಕ್ರಿಯೆಯ ಬಳಕೆ ಇದೆ. ಔಷಧ ಮತ್ತು ಬಣ್ಣಗಳನ್ನು ತಯಾರಿಸಲು ಇದರ ಬಳಕೆ ಇದೆ. 

	3. ಪಿರ್ರೋಲ್ : ಇದು ಕೆಲವು ಆಲ್ಕಲಾಯ್ಡುಗಳಲ್ಲಿ, ಕ್ಲೋರೊಫಿಲ್ ಮತ್ತು ಹೀಮೊಗ್ಲೋಬಿನ್ ಗಳಲ್ಲಿರುವ ಘಟಕಗಳ ಮುಖ್ಯ ಅಂಶ. ಎಲುಬುಗಳನ್ನು ಕಾಸಿ ಆಸವನದಿಂದ ತಯಾರಾದ ಎಲುಬಿನ ಎಣ್ಣೆಯಲ್ಲಿ (ಡಿಪ್ಪೆಲ್ಸ್ ಆಯಿಲ್) ಇದು ಅಧಿಕ ಪ್ರಮಾಣದಲ್ಲಿದೆ. ಇದು ಕ್ಲೋರೊಫಾ ರ್ಮಿನಂತೆ ವಾಸನೆಯುಳ್ಳ ವರ್ಣರಹಿತ ದ್ರವ. ಹವೆಯ ಸಂಪರ್ಕದಿಂದ  ಬೇಗನೆ ಕಂದುಬಣ್ಣ ತಳೆದು ಕೊನೆಗೆ ರಾಳದಂತೆ ಗಟ್ಟಿಯಾಗುತ್ತದೆ. ಅಯೊಡೋಲ್ ಮೊದಲಾದ ಪಿರ್ರೊಲ್ ಉತ್ಪಾದನಾ ಸಂಯುಕ್ತಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. 

	ಪಡ್ಪರಮಾಣವಿಕ ಚಕ್ರೀಯ ಸಂಯುಕ್ತಗಳು : 1. ಪಿರಿಡೀನ್. ಇದು ಎಲುಬಿನ ಎಣ್ಣೆಯಲ್ಲಿ, ಕೋಲ್‍ಟಾರಿನ ಲಘುತೈಲದ ಅಂಶದಲ್ಲಿ (ಲೈಟ್ ಆಯಿಲ್ ಫ್ರ್ಯಾಕ್ಷನ್) ಮತ್ತು ಅನೇಕ ಆಲ್ಕಲಾಯ್ಡುಗಳ ರಚನಾಚಕ್ರವಾಗಿ ಇರುತ್ತದೆ. ರಚನೆಯಲ್ಲಿ ಇದು ಬೆನ್‍ಜಿûೀನ್ ಚಕ್ರವನ್ನು ಹೋಲುತ್ತದೆ. ಒಂದು ಜಾಗದಲ್ಲಿ -ಅಊ- ಬಂಧ ಇದೆ. ಆದರೆ ರಾಸಾಯನಿಕವಾಗಿ ಬೆನ್‍ಜಿûೀನಿಗಿಂತಲೂ ಹೆಚ್ಚು ಸ್ಥಿರ. ಪಿರಿಡೀನ್ ವರ್ಣರಹಿತ ಹಾಗೂ ಕಮಟು ವಾಸನೆಯ ದ್ರವ. 
	
ಹಲವಾರು ಸಾವಯವ ರಾಸಾಯನಿಕಕ್ರಿಯೆಗಳಲ್ಲಿ ಇದರ ಪ್ರತ್ಯಾಮ್ಲೀಯ ಮತ್ತು ದ್ರಾವ್ಯ ಗುಣಗಳು ಬಲು ಉಪಯುಕ್ತ. ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ಪ್ರಚೋದಕ (ಆಕ್ಸಿಲರೇಟರ್) ಮತ್ತು ವೇಗವರ್ಧಕವಾಗಿ (ಕ್ಯಾಟಲಿಸ್ಟ್) ಬಳಸುವುದಿದೆ. ಇದನ್ನು ಆಸ್ತಮಾ ಕಾಯಿಲೆಗೆ ಪ್ರತಿಕಾರಕವಾಗಿಯೂ ಬಳಸುತ್ತಾರೆ. ಆಲ್ಕೊಹಾಲಿನಲ್ಲಿ ಪಿರಿಡೀನ್ ಮಿಶ್ರಮಾಡಿ ಸೇವನೆಗೆ ಯೋಗ್ಯವಲ್ಲದ್ದಾಗಿ ಮಾಡಲು ಉಪಯೋಗಿಸುವುದುಂಟು. ಅನೇಕ ಸಸ್ಯರೋಗಗಳ ನಿರ್ಮೂಲನದಲ್ಲಿ ಇದರ ಉಪಯೋಗವಿದೆ. 

	2. ಪೈಪರಿಡೀನ್ : ರಾಸಾಯನಿಕ ಸೂತ್ರ C5H11NE ಇದು ಕರಿಮೆಣಸಿ ನಲ್ಲಿ (ಬ್ಲ್ಯಾಕ್ ಪೆಪ್ಪರ್) ಪೈಪೆರಿಕ್ ಆಮ್ಲದ ಸಂಯೋಗದಿಂದ ಪೈಪೆರಿನ್ ಎಂಬ ಆಲ್ಕಲಾಯಿಡ್ ರೂಪದಲ್ಲಿ ಇರುತ್ತದೆ. ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಮೆಣಸಿನ ವಾಸನೆಯುಳ್ಳ ವರ್ಣರಹಿತ ದ್ರವ. 

	ಸಂಘನಿತ ವಿಷಮ ಚಕ್ರೀಯ ಸಂಯುಕ್ತಗಳು : ಈ ಸಂಯುಕ್ತಗಳ ರಚನೆಯಲ್ಲಿ ಎರಡು ಅಥವಾ ಹೆಚ್ಚಿನ ಚಕ್ರಗಳು ಇವೆ. ಇವುಗಳ ಪೈಕಿ ಕನಿಷ್ಠ ಪಕ್ಷ ಒಂದಾದರೂ ವಿಷಮಚಕ್ರ. ವಿಷಮಚಕ್ರಗಳು ಪಂಚ (ಪಿರ್ರೋಲ್) ಅಥವಾ ಷಟ್ (ಪಿರಿಡೀನ್) ಪರಮಾವಿಕ- ವಾದವಾಗಿರಬಹುದು. ಇವುಗಳಲ್ಲಿ 1. ಕ್ವಿನೊಲೀನ್ (C9H7N), 2. ಐಸೊಕ್ವಿನೊಲೀನ್ (C9H7N), 3. ಇಂಡೋಲ್ (C8H7N), 4. ಇಂಡಾಕ್ಸಿಲ್ (C8H6(OH)N), 5. ಇಸಾಟಿನ್ (C8H5O2N), 6. ಇಂಡಿಗೋ (C16H10O2N2), 7. ಅಕ್ರಿಡೀನ್ (C13H9N) ಮುಖ್ಯವಾದವು. 

	1. ಕ್ವಿನೊಲೀನ್ : ಇದು ಬೆನ್‍ಜಿûೀನ್ ಮತ್ತು ಪಿರಿಡೀನ್ ಚಕ್ರಗಳ ಸಂಘನಿತ (ಕಂಡೆನ್ಸ್ಡ್) ಸಂಯುಕ್ತ ಆಗಿರುವುದರಿಂದ ಇದಕ್ಕೆ  ಚಿ-b ಬೆನ್eóÉೂೀಪಿರಿಡೀನ್ ಎಂಬ ಹೆಸರೂ ಇದೆ. ಕ್ವಿನೀನನ್ನು ಕ್ಷಾರದ ಸಂಗಡ ವಿಬಂಧನಗೊಳಿಸಿ ಕ್ವಿನೊಲೀನನ್ನು ಪಡೆಯಿತಾದ ಕಾರಣ ಈ ಹೆಸರಿದೆ. ಕೋಲ್‍ಟಾರ್ ಮತ್ತು ಎಲುಬಿನ ಎಣ್ಣೆಯಲ್ಲಿ ಕ್ವಿನೊಲೀನ್ ಇದೆ. ಇದೊಂದು ವರ್ಣರಹಿತ, ಅಸಹ್ಯ ವಾಸನೆಯುಳ್ಳ, ತುಸುಮಟ್ಟಿಗೆ ಅನಿಲೀನನ್ನು ಹೋಲುವ ದ್ರವ. ರಾಸಾಯನಿಕವಾಗಿ ಬೆನ್‍ಜಿûೀನ್ ಮತ್ತು ಪಿರಿಡೀನ್‍ಗಳಂತೆಯೇ ವರ್ತಿಸುತ್ತದೆ. ಇದು ಪೂತಿನಾಶಕ. ಪೃಥಕ್ಕರಣೆಗಳಲ್ಲಿ, ಅಧಿಕ ಉಷ್ಣತೆಯ ರಾಸಾಯನಿಕ ಕ್ರಿಯೆಗಳಲ್ಲಿ ದ್ರವದಂತೆ ಉಪಯೋಗಕ್ಕೆ ಬರುತ್ತದೆ. ಕ್ವಿನೊಲೀನ್ ಎಲ್ಲೋದಂಥ, ಹೆಚ್ಚಿನ ಬೆಲೆಯುಳ್ಳ, ಬಣ್ಣ ಹಾಗೂ ಪ್ಲಾಸ್ಮೊಕ್ವೀನಿನಂಥ ಔಷಧ ತಯಾರಿಕೆಯಲ್ಲಿ ಇದರ ಬಳಕೆ ಇದೆ. 

	2. ಐಸೊಕ್ವಿನೊಲೀನ್ : ಇದು ಕ್ವಿನೊಲೀನಿನಂತೆಯೇ ಬೆನ್‍ಜಿûೀನ್ ಮತ್ತು ಪಿರಿಡೀನ್ ಚಕ್ರಗಳ ಸಂಘನಿತ ಸಂಯುಕ್ತ. ಆದರೆ ಈ ಎರಡೂ ಚಕ್ರಗಳು ಬೇರೆ (bg) ಕಾರ್ಬನ್ನುಗಳ ಮೇಲೆ ಜೋಡಣೆಗೊಂಡಿವೆ. ಮಾರ್ಫಿನ್, ನಿಕೊಟೀನ್, ಪಾಪಾವೆರಿನ್ ಮೊದಲಾದ ಆಲ್ಕಲಾಯ್ಡುಗಳಲ್ಲಿ ಐಸೊಕ್ವಿನೊಲೀನ್ ಚಕ್ರವೇ ಕೇಂದ್ರ ಭಾಗ. ಅಲ್ಪ ಪ್ರಮಾಣದಲ್ಲಿ ಕೋಲ್‍ಟಾರಿನಲ್ಲಿ ಇದು ಲಭ್ಯ. ಸಂಶ್ಲೇಷಣೆ ರೀತಿಯಿಂದಲೂ ಇದನ್ನು ತಯಾರಿಸುತ್ತಾರೆ. 

(i) ಬೆನ್‍ಜಿûೀನ್ ಅಮೈನೋ ಅಸಿಟಾಲ್ಡಿಹೈಡನ್ನು ಹೊಗೆಯಾಡುತ್ತಿರುವ ಸಲ್ಫ್ಯೂರಿಕ್ ಆಮ್ಲದಿಂದ ನಿರ್ಜಲೀಕರಿಸಿ ಅನಂತರ ಉತ್ಕರ್ಷಿಸುವುದ ರಿಂದ ಐಸೊಕ್ವಿನೊಲೀನ್ ಉಂಟಾಗುತ್ತದೆ. 

(ii) ಸಿನೆಯಾಲ್ಡಿಹೈಡ್ ಆಕ್ಸೈಡನ್ನು ಫಾಸ್ಫರಸ್ ಪೆಂಟಾಕ್ಸೈಡಿನ ಜೊತೆ ಕಾಸಿದಾಗ ನಿರ್ಜಲೀಕರಣ ಕ್ರಿಯೆ ನಡೆದು ಐಸೊಕ್ವಿನೊಲೀನ್ ಉಂಟಾಗುತ್ತದೆ. 

ಇದು ವರ್ಣರಹಿತ, ಸ್ಫಟಿಕಾಕಾರದ ಘನ ವಸ್ತು. ಬೆನ್eóÁಲ್ಡಿಹೈಡಿನ ವಾಸನೆ ಇದೆ. ಕ್ವಿನೊಲೀನಿನ ಗುಣಧರ್ಮಗಳನ್ನು ಹೋಲುತ್ತದೆ. 

	3. ಇಂಡೋಲ್ : ಇದು ಒಂದು ಬೆನ್‍ಜಿûೀನ್‍ಚಕ್ರ ಮತ್ತೊಂದು ಪಿರ್ರೋಲ್ ಚಕ್ರದ ಕಾರ್ಬನ್ನುಗಳ ಮೇಲೆ ಸಂಘನಿಸಿದೆ. ಇದಕ್ಕೆ ಬೆನ್eóÉೂ ಪಿರ್ರೋಲ್ ಎಂದೂ ಹೆಸರಿದೆ. ನೀಲಿಬಣ್ಣದ ವಸ್ತು. ಮಲ್ಲಿಗೆ ಎಣ್ಣೆಯಲ್ಲೂ (2.5%) ನೆರೋಲಿ ಎಣ್ಣೆಯಲ್ಲೂ ಇದೆ. ಕೋಲ್ ಟಾರಿನ ಭಾರತೈಲ ದಲ್ಲಿಯ ಅಂಶದಲ್ಲೂ ಇದು ಸೇರಿದೆ. ಇಂಡಿಗೋವನ್ನು ಸತುವಿನ ಚೂರ್ಣದ ಜೊತೆಗೆ ಕಾಸುವುದರಿಂದ ಇದು ಲಭಿಸುತ್ತದೆ ಎಂದು ರಸಾಯನವಿಜ್ಞಾನಿ ಬೇಯರ್ ತಿಳಿಸಿದ್ದರಿಂದ ಈ ಸಂಯುಕ್ತಕ್ಕೆ ಇಂಡೋಲ್ ಎಂಬ ಹೆಸರು ಬಂತು. ಇದನ್ನು ಸಂಶ್ಲೇಷಣ ವಿಧಾನದಿಂದ ತಯಾರಿಸುವುದಿದೆ. ಆರ್ಥೊನೈಟ್ರೊಸಿನ್ಯಾಮಿಕ್ ಆಮ್ಲವನ್ನು ಕಾಸ್ಟಿಕ್ ಪೊಟ್ಯಾಷ್ ಮತ್ತು ಕಬ್ಬಿಣದ ಚೂರಿನೊಂದಿಗೆ ಕಾಸುವುದರಿಂದ ಇಂಡೋಲ್ ಲಭಿಸುತ್ತದೆ. ವರ್ಣರಹಿತ, ಬಾಷ್ಪಶೀಲ, ಅಧಿಕ ದುರ್ವಾಸನೆ ಯುಕ್ತ ಘನವಸ್ತು. ಆದರೆ ಶುದ್ಧೀಕರಣದಿಂದ ಇದನ್ನು ಬೇರೆ ಎಣ್ಣೆಯ ಜೊತೆ ಅಲ್ಪ ಪ್ರಮಾಣದಲ್ಲಿ ಬೆರೆಸಿದರೆ ಇದಕ್ಕೆ ಸುವಾಸನೆ ಉಂಟಾಗು ತ್ತದೆ. ಇದನ್ನು ಓeóÉೂೀನಿನೊಂದಿಗೆ ಉತ್ಕರ್ಷಿಸಿದರೆ ಇಂಡಿಗೋ ಲಭಿಸು ವುದು. ಪೈನ್ ಮರದ ಚೂರುಗಳ ಜೊತೆಗಾದರೋ ಕಡುಗೆಂಪು ಬಣ್ಣ ಹೊಂದುತ್ತದೆ. 

	4. ಇಂಡಾಕ್ಸಿಲ್ : ಇದು ಇಂಡಿಗೋ ಗಿಡದಲ್ಲಿ ಇಂಡಿಕನ್ ಹೆಸರಿನಿಂದ ಗ್ಲೂಕೊನಾಯ್ಡ್ ರೂಪದಲ್ಲೂ ಸ್ತನಿಗಳ ಮೂತ್ರದಲ್ಲಿ ಪೊಟ್ಯಾಸಿಯಮ್ ಇಂಡಾಕ್ಸಿಲ್ ಸಲ್ಫೇಟ್ ರೂಪದಲ್ಲೂ ಇರುತ್ತದೆ. ಇಂಡಿಗೋ ಸಂಯುಕ್ತವನ್ನು ಪೊಟ್ಯಾಷ್‍ನ ಜೊತೆ ದ್ರವಿಸುವಂತೆ ಕಾಸಿ ಇಲ್ಲವೆ ಅದರ ಜೊತೆಗೆ ಗಿಡದಲ್ಲೇ ಇರುವ ಎನ್eóÉೈಮಿನ ಜೊತೆ ಇಂಡಿಕನ್‍ನನ್ನು ಜಲವಿಶ್ಲೇಷಣೆಗೆ ಈಡುಮಾಡಿ ಪಡೆಯಬಹುದು. ಇದು ಹಳದಿ ವರ್ಣದ, ಸ್ಫಟಿಕಾಕಾರದ, ಅಸ್ಥಿರ ಪದಾರ್ಥ. ನೀರಿನಲ್ಲಿ ಮತ್ತು ಕ್ಷಾರದಲ್ಲಿ ದ್ರಾವ್ಯ. ಕ್ಷಾರದ್ರಾವಣದಲ್ಲಿ ಇದು ಕೂಡಲೆ ಹವೆಯಿಂದ ಉತ್ಕರ್ಷಣಗೊಂಡು ಇಂಡಿಗೋ ತಯಾರಾಗುತ್ತದೆ. 

	5. ಇಸಾಟಿನ್ : ಇಂಡಿಗೋವನ್ನು ನೈಟ್ರಿಕ್ ಆಮ್ಲದೊಂದಿಗೆ ಉತ್ಕರ್ಷಿ ಸಿದಾಗ ಇಸಾಟಿನ್ ಉಂಟಾಗುತ್ತದೆ. ಇದನ್ನು ಆರ್ಥೊನೈಟ್ರೊಫೀನೈಲ್ ಪ್ರೊಪಿಯಾಲಿಕ್ ಆಮ್ಲದ ಮೇಲೆ ಕಾಸ್ಟಿಕ್ ಪೊಟ್ಯಾಷ್ ದ್ರಾವಣದ ಕ್ರಿಯೆಯಿಂದಲೂ ತಯಾರಿಸಬಹುದು. ಇದರ ಬಣ್ಣ ಕಿತ್ತಳೆಗೆಂಪು  ಅಶ್ರಕದ ಆಕಾರದಲ್ಲಿ ಸ್ಫಟಿಕೀಕರಿಸುತ್ತದೆ. ತಣ್ಣನೆಯ ನೀರಿನಲ್ಲಿ ಅಲ್ಪ ದ್ರಾವ್ಯ; ಆಲ್ಕೊಹಾಲ್, ಈಥರ್ ಮತ್ತು ಪ್ರತ್ಯಾಮ್ಲಗಳಲ್ಲಿ ಸಹಜವಾಗಿ ವಿಲೀನಿಸುತ್ತದೆ. ಪಾಸ್ಫರಸ್ ಪೆಂಟಾಕ್ಲೋರೈಡಿನ ಜೊತೆಗೆ ಇಸಾಟಿನ್ ಕ್ಲೋರೈಡ್ ಉಂಟಾಗುತ್ತದೆ. ಇದನ್ನು ಸತುವಿನ ಪುಡಿ ಮತ್ತು ಅಸಿಟಿಕ್ ಆಮ್ಲದಿಂದ ಅಪಕರ್ಷಿಸಿದರೆ ಇಂಡಿಗೋ ಉತ್ಪತ್ತಿಯಾಗುತ್ತದೆ. 

	6. ಇಂಡಿಗೋ : ಇದನ್ನು ಇಂಡಿಗೋಟಿನ್ ಎಂದೂ ಕರೆಯುವುದಿದೆ. ನೈಸರ್ಗಿಕ ವನಸ್ಪತಿ ಜನ್ಯ, ಅಮೂಲ್ಯ ನೀಲಿ ಬಣ್ಣದ ವಸ್ತು. ಹನ್ನೆರಡನೆಯ ಶತಮಾನದಿಂದ ಇದನ್ನು ಭಾರತದಲ್ಲಿ  ವಿಶೇಷವಾಗಿ ಬೆಳೆಸುತ್ತಿದ್ದು  ಇಲ್ಲಿಯ  ಡಚ್ಚರು ಯುರೋಪಿಗೆ ಕೊಂಡೊಯ್ದರು. ಇದು ಇಂಡಿಗೋ ವನಸ್ಪತಿಯಲ್ಲಿ ವರ್ಣರಹಿತ ಮತ್ತು ಸ್ಫಟಿಕಾಕಾರದ ಇಂಡಿಕನ್ ಎಂಬ ಗ್ಲ್ಯೂಕೊಸಾಯ್ಡ್ ರೂಪದಲ್ಲಿ ಲಭಿಸುತ್ತದೆ. ಇಂಡಿಗೋ ಗಿಡಗಳು ಉಷ್ಣವಲಯದ ಪ್ರದೇಶಗಳಾದ ಭಾರತ, ಜಾವ, ಚೀನ ದೇಶಗಳು ಮತ್ತು ಯುರೋಪಿನಲ್ಲಿ ಕಾಣಬರುವ ವೋಡ್ ಎಂಬ ಗಿಡದಲ್ಲಿ ಇಂಥದ್ದೇ ಆದ ಪದಾರ್ಥ ಕಾಣಬರುತ್ತದೆ. ಇದು ಗಿಡದ ಎಲೆಗಳಲ್ಲಿ ಮತ್ತು ಟೊಂಗೆಗಳಲ್ಲಿ ಅಡಕಗೊಂಡಿರುತ್ತದೆ. ವರ್ಷಕ್ಕೆ ಎರಡು ಮೂರು ಸಲ ಹೂ ಬಿಡುವುದಕ್ಕಿಂತಲೂ ಮುಂಚೆ ಕತ್ತರಿಸಿ ಮರದ ದೊಡ್ಡ ಪಿಪಾಯಿಗಳಲ್ಲಿ ನೀರಿನ ಒಳಗಡೆ ಮುಳುಗಿಸಿಟ್ಟರೆ ಅವುಗಳಲ್ಲಿರುವ ಇಂಡಿಕನ್ ಪದಾರ್ಥ ಅದರ ಪಕ್ಕದಲ್ಲಿಯೇ ಬೇರೆ ಕೋಶಗಳಲ್ಲಿರುವ ಎನ್eóÉೈಮಿನ ಜೊತೆ 10-12 ಗಂಟೆ ಕಾಲದಲ್ಲಿ ಜಲವಿಶ್ಲೇಷಣೆಗೊಂಡು ಗ್ಲೂಕೋಸ್ ಮತ್ತು ಇಂಡಾಕ್ಸಿಲ್ ಹೊರಬರುತ್ತವೆ. ಖನಿಜವನ್ನು ಆಮ್ಲಗಳ ಜೊತೆ ಕುದಿಸಿದರೂ ಇದೇ ಕ್ರಿಯೆ ಜರಗುತ್ತದೆ. ಈ ಕಚ್ಚಾ ಇಂಡಿಗೋದಲ್ಲಿ ಪ್ರಮುಖವಾಗಿ ನೂರಕ್ಕೆ 80ರಷ್ಟು ನೀಲಿ ಇಂಡಿಗೋ ಮತ್ತು ಅಲ್ಪ ಪ್ರಮಾಣದಲ್ಲಿ ಕೆಂಪು, ಕಂದು ಬಣ್ಣದ ಇಂಡಿಗೋ ಸಹ ಇರುತ್ತವೆ. ಮುಂದೆ ಇಂಡಾಕ್ಸಿಲ್ ಹವೆಯಿಂದ ಉತ್ಕರ್ಷಣಗೊಂಡು ಇಂಡಿಗೋ ಉಂಟಾಗುತ್ತದೆ. 

	ಗುಣಗಳು : ಇದು ಕಪ್ಪುನೀಲಿವರ್ಣದ ಸ್ಫಟಿಕಾಕಾರದ ಪುಡಿ. ನೀರಿನಲ್ಲಿ ಹಾಗೂ ಅನೇಕ ಸಾವಯವ ದ್ರವಗಳಲ್ಲಿ ವಿಲೀನವಾಗುವುದಿಲ್ಲ; ಆದರೆ ನೈಟ್ರೊಬೆನ್‍ಜಿûೀನ್ ಕ್ಲೋರೊಫಾರ್ಮ್ ಮತ್ತು ಸಲ್ಫ್ಯೂರಿಕ್ ಆಮ್ಲಗಳಲ್ಲಿ ಸಹಜವಾಗಿ ವಿಲೀನಗೊಳ್ಳುತ್ತದೆ. 

	ಮುದ್ರಣ ಶಾಯಿಯ ತಯಾರಿಕೆಯಲ್ಲಿ ಹಾಗೂ ನೂಲುಬಟ್ಟೆಗೆ ಬಣ್ಣ ಕೊಡುವುದರಲ್ಲಿ ಉಪಯೋಗಕ್ಕೆ ಬರುತ್ತದೆ. ನೂಲಿಗೆ ಬಣ್ಣ ಹಾಕುವಾಗ ವ್ಯಾಟ್ ಪದ್ಧತಿ ಅನುಸರಿಸುವುದಿದೆ. ನೈಟ್ರಿಕ್ ಆಮ್ಲದಿಂದ ಇಂಡಿಗೋ ಉತ್ಕರ್ಷಣಗೊಂಡು ಇಸಾಟಿನ್ ಆಗಿ ಪರಿವರ್ತನೆ ಹೊಂದುತ್ತದೆ. ಒಂದನ್ನೇ ಕಾಸಿದರೆ ಅನಿಲೀನ್ ಹೊರಬರುತ್ತದೆ. ಸತುವಿನ ಪುಡಿಯೊಂದಿಗೆ ಕಾಸಿದರೆ ಇಂಡೋಲ್ ಉಂಟಾಗುತ್ತದೆ ನೋಡಿ-ಇಂಡೋಲ್.

	7. ಅಕ್ರಿಡೀನ್ : ಕೋಲ್‍ಟಾರಿನ ಕಚ್ಚಾ ಆಂಥ್ರಾಸೀನ್ ಮತ್ತು ಅಶುದ್ಧ ಡೈಫೀನೈಲ್ ಅಮೈನಿನಲ್ಲಿ ಇರುವ ಪ್ರತ್ಯಾಮ್ಲ ಗುಣದ ಘಟಕ. ವರ್ಣರಹಿತ ಸೂಜಿಸ್ಫಟಿಕಾಕಾರದ್ದು.  ಆಂಥ್ರಾಸೀನ್ ಮತ್ತು ಅಕ್ರಿಡೀನ್ ಇವುಗಳ ಸಂಬಂಧ ಬೆನ್‍ಜಿûೀನ್ ಮತ್ತು ಪಿರಿಡೀನ್‍ಗಳ ನಡುವಿನ ಸಂಬಂಧವಿದ್ದಂತೆಯೇ. ಆಂಥ್ರಾಸೀನಿನೊಳಗಿನ ನಡುವಣ ಚಕ್ರದ ಮಧ್ಯೆ ಒಂದು ಅಊ ಸ್ಥಳದಲ್ಲಿ ನೈಟ್ರೊಜನ್ ಸೇರಿದರೆ ಅಕ್ರಿಡೀನ್ ಏರ್ಪಡುತ್ತದೆ. ಅಕ್ರಿಡೀನಿನ ರಾಸಾಯನಿಕ ಸೂತ್ರವನ್ನು ವಿಶ್ಲೇಷಣ ಹಾಗೂ ಸಂಶ್ಲೇಷಣ ವಿಧಾನಗಳೆರಡರಿಂದಲೂ ಸಿದ್ಧಪಡಿಸಲಾಗಿದೆ. 

	ಅಕ್ರಿಡೀನನ್ನು ಉತ್ಕರ್ಷಿಸಿದರೆ ಕ್ವಿನೊಲೀನ್ 2-3 ಡೈಕಾರ್ಬಾಕ್ಸಿನೈಲ್ ಮತ್ತು ಪಿರಿಡೀನ್ ಟೆಟ್ರಾಕಾರ್ಬಾಕ್ಸಿಲಿಕ್ ಆಮ್ಲಗಳು ಹೊರಬರುತ್ತವೆ. ಸಂಶ್ಲೇಷಣ ವಿಧಾನದಿಂದ, ಡೈಫೀನೈಲ್ ಅಮೀನ್ ಮತ್ತು ಫಾರ್ಮಿಕ್ ಆಮ್ಲ ಅಥವಾ ಫಾರ್ಮಿಕ್ ಡೈಫೀನೈಲ್ ಅಮೀನ್ ಹಾಗೂ ಜಿಂಕ್ ಕ್ಲೋರೈಡ್‍ಗಳ ಕ್ರಿಯೆಯಿಂದ ಅಕ್ರಿಡೀನ್ ಉಂಟಾಗುತ್ತದೆ. ಬೆನ್eóÁಲಿನ್ ಅಥವಾ ಆರ್ಥೊಅಮೈನೋಡೈಫೀನೈಲ್ ಮೀಥೇನ್ ಬಾಷ್ಪವನ್ನು ಕಾಸಿದ ಕೊಳವೆ ಮೂಲಕ ಹಾಯಿಸಿಯೂ ತಯಾರಿಸಬಹುದು. ಅಕ್ರಿಡೀನನ್ನು ಬಣ್ಣಗಳ ತಯಾರಿಕೆಗೆ ಬಳಸುವುದಿದೆ. ಷಟ್ಪರಮಾಣವಿಕ ಚಕ್ರೀಯ ಸಂಯುಕ್ತಗಳಲ್ಲಿ ಸಹ ನಾಲ್ಕು ಕಾರ್ಬನ್ ಪರಮಾಣುಗಳು ಇನ್ನುಳಿದ ಎರಡು ಭಿನ್ನ ಪರಮಾಣುಗಳನ್ನು ಒಳಗೊಂಡ ಸಂಯುಕ್ತಗಳ ಪೈಕಿ ಪ್ಯಾರಾಕ್ಸಾಜಿûೀನ್, ಥಾಯ್‍ಜಿûೀನ್, ಡಾಯ್‍ಜೀನ್ ಮುಖ್ಯ. ಇವುಗಳ ಪೈಕಿ ಕೆಲವು ಉತ್ತಮ ಬಣ್ಣಗಳ ಆಗರಗಳಾಗಿವೆ. ಫ್ಯುರಿನ್ ಗುಂಪಿನಲ್ಲಿ ಬರುವ ಫ್ಯುರಿನ್, ಯೂರಿಕ್ ಆಮ್ಲ, ಕ್ಸಾಂಥಾಯಿನ್, ಗ್ವಾನಿನ್, ಥಿಯೊಬ್ರೊಮೀನ್, ಕೆಫೀನ್ ಇವೂ ಭಿನ್ನಪರಮಾಣು ಚಕ್ರಗಳ ಸಂಯುಕ್ತಗಳಾಗಿರುವುದರಿಂದ ವಿಷಮ ಚಕ್ರೀಯ ಸಂಯುಕ್ತಗಳು ಎನಿಸಿವೆ.							
		(ಆರ್.ಪಿ.ಡಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ